ಹುಲಿರಾಯ ಸಿನಿಮಾದ ನಟಿ ದಿವ್ಯ ಉರುಡುಗಾಗೆ ಬಂತು ಅದೃಷ್ಟ | Filmibeat Kannada

2017-12-19 2

Kannada movie 'Huliraya' fame actress Divya Uruduga to play an important role with actress Priyamani in her new kannada movie Dhwaja. The movie directed by cinematographer Ashok Kashyap.


'ಹುಲಿರಾಯ' ಸಿನಿಮಾ ನೋಡಿದವರಿಗೆ ಅದರಲ್ಲಿ ತುಂಬ ಇಷ್ಟ ಆಗುವ ಅಂಶಗಳಲ್ಲಿ ನಾಯಕಿ ಕೂಡ ಒಬ್ಬರು. ಹುಲಿರಾಯನಾಗಿ ನಟಿಸಿರುವ ನಾಯಕ ಬಾಲು ನಾಗೇಂದ್ರ ಜೊತೆ ಜಿಂಕೆಯಂತೆ ಕಾಣಿಸಿಕೊಂಡಿದ್ದು ನಟಿ ದಿವ್ಯ ಉರುಡುಗ. 'ಹುಲಿರಾಯ' ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದರು ಕೂಡ ದಿವ್ಯ ಸಿನಿಮಾ ರಿಲೀಸ್ ಆಗುವುದಕ್ಕೂ ಮುಂಚೆಯೇ ಫೇಮಸ್ ಆಗಿ ಬಿಟ್ಟಿದ್ದರು.'ಹುಲಿರಾಯ' ಸಿನಿಮಾದ ನಂತರ ದಿವ್ಯ ಈಗ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಎರಡನೇ ಚಿತ್ರದಲ್ಲಿಯೇ ದೊಡ್ಡ ಅವಕಾಶ ಅವರ ಪಾಲಾಗಿದೆ. ಈ ಚಿತ್ರದಲ್ಲಿಯೂ ಬಜಾರಿ ಹುಡುಗಿಯಾಗಿ ಅವರು ನಟಿಸುತ್ತಿದ್ದಾರೆ. ಈ ವರ್ಷ ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಎಂಟ್ರಿಯಾಗಿರುವ ಈ ನಟಿ ಈಗ ಎರಡ್ಮೂರು ಸಿನಿಮಾದಲ್ಲಿ ಬಿಜಿ ಇದ್ದಾರೆ. ಹುಲಿರಾಯ' ನಂತರ ದಿವ್ಯ ಈಗ 'ಧ್ವಜ' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ತಮ್ಮ ಹೊಸ ಚಿತ್ರದ ಪೋಸ್ಟರ್ ಮತ್ತು ಚಿತ್ರೀಕರಣದ ಫೋಟೋವನ್ನು ಅವರ ಫೇಸ್ ಬುಕ್ ಖಾತೆಯಲ್ಲಿ ದಿವ್ಯ ಹಂಚಿಕೊಂಡಿದ್ದಾರೆ.

Videos similaires